`ಸಿದ್ದ-ಗಂಗಾ` ಈ ವಾರ ತೆರೆಗೆ
Posted date: 26 Wed, Sep 2012 ? 09:30:10 AM

ಹೊಸ ಅನ್ವೇಷಣೆ, ಹೊಸ ಪ್ರಯೋಗ, ಹೊಸ ವಸ್ತುಗಳ ವಿಚಾರವನ್ನು ಪ್ರೇಕ್ಷಕನ ಮುಂದೆ ಇಡುವುದು ಸಿನೆಮಾ ಮಾಧ್ಯಮ ಮುಖಾಂತರ ಮಾಡುವುದು ಶ್ಲಾಘನೀಯ ಕೆಲಸ. ಅದನ್ನೇ ‘ಸಿದ್ದ-ಗಂಗಾ’ ಸಿನೆಮಾ ಸಹ ಮಾಡಿದೆ. ಕಳೆದ ತಿಂಗಳು ಸೆನ್ಸರ್ ಮಂಡಳಿ ಇಂದ ‘ಯು’ ಅರ್ಹತಾ ಪತ್ರ ಪಡೆದ ಈ ಚಿತ್ರ ಈ ವಾರ ಪ್ರೇಕ್ಷಕನ ಮುಂದೆ ಬರಲು ಸಿದ್ದವಾಗಿದೆ.

ಈ ಸಿನೆಮಕ್ಕೆ ಸ್ಪೂರ್ತಿಯೇ ಶ್ರೀ ಸಿದ್ದಗಂಗಾ ಕ್ಷೇತ್ರ. ಅಲ್ಲಿಯ ತ್ರಿದಾಸೋಹ ಪದ್ದತಿಯನ್ನು ಅಳವಡಿಸಿಕೊಂಡು ೧೦೫ ವರ್ಷದ ಶ್ರೀ ಶಿವಕುಮಾರಸ್ವಾಮಿಗಳ ಅನುಮತಿಯೊಂದಿಗೆ ಅವರನ್ನು ಸಹ ತಾರಗಣದಲ್ಲಿ ಬಾಗಿಯಾಗಿಸಿದ್ದಾರೆ ಹಲವು ಸಾಮಾಜಿಕ ಬದ್ದತೆಯನ್ನು ಸಿನೆಮಾ ಮುಖಾಂತರ ಹೇಳಿರುವ ನಿರ್ದೇಶಕ ಜಿ ಮೂರ್ತಿ ಅವರು. ಹೆಸರಾಂತ ಕಲಾ ನಿರ್ದೇಶಕರಾಗಿ ಕುರುನಾಡು, ಶಂಕರ ಪುಣ್ಯಕೋಟಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಮೂರ್ತಿ ಅವರು ನಿಡುಸಾಲೆ ಪುಟ್ಟಸ್ವಾಮಯ್ಯ ಅವರ ನಿರ್ಮಾಣದಲ್ಲಿ ಚಿತ್ರ ಮಾಡಿದ್ದಾರೆ. ಇದೊಂದು ಮನ ಮುಟ್ಟುವ ಕಥೆ ಒಳಗೊಂಡಿರುವ ಚಿತ್ರ ಎಂದು ನಿರ್ದೇಶಕ ಜಿ. ಮೂರ್ತಿ ತಿಳಿಸುವರು.

 ‘ಸಿದ್ದ-ಗಂಗಾ’ ಚಿತ್ರದಲ್ಲಿ ಮೂವರು ಹೆಸರಾಂತ ವ್ಯಕ್ತಿಗಳದ ಚೆಲುವರಾಯ ಸ್ವಾಮಿ, ರೇವಣ್ಣ ಸಿದ್ದಯ್ಯ, ಚೆನ್ನ ಬಸಪ್ಪ ಗೌರವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 ಶ್ರೀ ಶಿವಕುಮಾರಸ್ವಾಮಿಗಳು ಅಲ್ಲದೆ ಶ್ರೀ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಹ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

 ಮಾಸ್ಟೆರ್ ಮನೋಜ್, ತನ್ಮಯ, ರವಿ ಚೇತನ್, ರಮೇಶ್ ಭಟ್, ವೀಣ ಸುಂದರ್, ನೀಡಶಾಲೆ ಪುಟ್ಟಶ್ವಮಯ್ಯ, ಬ್ಯಾಂಕ್ ಜನಾರ್ಧನ್, ಹೊನ್ನಾವ್ಳಲಿ ಕೃಷ್ಣ, ಚಂದ್ರಶೇಖರ್, ಜಗದೀಶ್, ನಾಗರಾಜ್, ಈಶಪ್ಪ ಹಾಗೂ ಇತರರು ಭೂಮಿಕೆಯಲ್ಲಿ ಇದ್ದಾರೆ.

 ಪಿ, ಕೆ. ಎಚ್ ದಾಸ್ ಛಾಯಾಗ್ರಹಣ, ಬಿ. ಎಸ್ ಕೆಂಪರಾಜ್ ಅವರ ಸಂಕಲನ, ಬಿ. ಆರ್, ಸತ್ಯಲಿಂಗರಾಜು ಅವರ ಸಾಹಿತ್ಯ ಹಾಗೂ ಸಂಭಾಷಣೆ ಇರುವ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಪಿಚ್ಚಲ್ಲಿ ಶ್ರೀನಿವಾಸ್ ಸಂಗೀತ ನೀಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed